ಅಮ್ಮಾ ಎಂದರೆ ….

ನನಗೆ ನಿದ್ದೆ ಅಂದರೆ ಪಂಚಪ್ರಾಣ. ಯಾರಾದ್ರೂ ನಿಂಗೆ ಸಾಯೋ ಮುಂಚೆ ಕೊನೆ ಆಸೆ ಏನಪ್ಪಾ ಅಂದ್ರೆ, ಒಂದೆರಡು ತಾಸು ಮಲಗೆದ್ದು ಬರ್ತೀನಿ, ಆಮೇಲೆ ಸಾಯ್ಸಿ ಅನ್ನೋ ಜಾಯಮಾನ ನಂದು. ಅದೊಂದು ದಿನ ಅದೆಷ್ಟು ಹೊರಳಾಡಿದರೂ ನಿದ್ದೆ ಪ್ರಾಪ್ತಿಯಾಗೋ ಲಕ್ಷಣಗಳೇ ಇರಲಿಲ್ಲ. Mobile charge ಖಾಲಿ ಆಗೋವರ್ಗು ಮೊಬೈಲ್ ನೋಡ್ಲಿಲ್ಲ ಅಂದ್ರೆ 20 ಸಾವಿರ ಕೊಟ್ಟು ತೊಗೊಂಡ ಮೊಬೈಲ್ ಗೆ ಅವಮಾನ ಅಂತೇ. ಮಲಗುವ ಮುನ್ನ ಬಾತ್ರೂಮ್ ಗೆ ಹೋಗಿ ಬರೋದು ಮರೀಬಹುದು. ಮೊಬೈಲ್ ನೋಡದೆ ಇರೋದು ಮರೆಯೋಲ್ಲ ನಮ ಜನರೇಷನ್ ಅವ್ರು. ಎಲ್ಲ appsನ ದರ್ಶನ ಪಡೆದ ನಂತರ Gallery ಯಲ್ಲಿನ ಬೇಡದ photos delete ಮಾಡೋಕೆ ಮುಂದಾದೆ. ಆಗ ಅದೊಂದು video ಮೇಲೆ ಮತ್ತೆ ನನ್ನ ಕಣ್ಣು ಬಿತ್ತು. 3-4 ವರ್ಷಗಳ ಹಿಂದೆ ನನ್ನ ಅಣ್ಣನ ಮಗಳು ಚಹಾ ಮಾಡುವ ವಿಡಿಯೋ ದೃಶ್ಯ ಅದು. Cute ಆಗಿದ್ದ ಆ video ನಾನು ಇನ್ನು ಇಟ್ಟುಕೊಂಡಿದ್ದು ಅದರಲ್ಲಿ ನನ್ನ ಅಮ್ಮ ಇದ್ದುದ ಕಾರಣಕ್ಕೆ. ಈ photo, video ಗಳು ಒಂಥರಾ ಹುಣ್ಣಿಮೆ ಚಂದಿರನಂತೆ, ನೋಡಕ್ಕೆ ಹಿತವಾಗಿದ್ದರೂ ಶಾಂತವಾಗಿರೋ ಸಮುದ್ರವನ್ನೇ ಅಲ್ಲೋಲ ಕಲ್ಲೋಲ ಮಾಡುತ್ತವೆ.

ಆ ಒಂದು ವಿಡಿಯೋದಿಂದ ಸಾವಿರ ದೃಶ್ಯಾವಳಿಗಳು ಕಣ್ಣ ಮುಂದೆ ಹರಿಯ ತೊಡಗಿದವು. ಆವತ್ತು Germany ಇಂದ ಒಂದು ವರ್ಷದ ನಂತರ Indiaಗೆ ಬರುವಾಗ surprise ಕೊಡಲೆಂದೇ ಮನೆಯಲ್ಲಿ ತಿಳಿಸದೇ ಧಿಡೀರನೆ ಬಂದಿಳಿದಿದ್ದೆ. ನನ್ನ surprise ಹೋಗಿ ನನಗೆ ಶಾಕ್ ಕೊಟ್ಟಿದ್ದರು ನಮ್ಮಮ್ಮ. 2-3 ತಿಂಗಳಿಂದ ಅವರಿಗೆ ಹುಷಾರಿಲ್ಲದ್ದನ್ನು ನನಗೆ ಯಾರೂ ತಿಳಿಸಿಯೇ ಇರಲಿಲ್ಲ. Financially ಸ್ವಲ್ಪ stable ಆಗಿ, ಎಲ್ಲ ಸುಖಮಯವಾಗಿ ಇನ್ನೇನು perfect ಅನ್ನೋವಂತ ಜೀವನ ನಡೀತಾ ಇದೆ ಅನ್ನೋವಾಗ ಗೊತ್ತಾಗಿದ್ದು ನಮ್ಮಮ್ಮನಿಗೆ ಕ್ಯಾನ್ಸರ್ ಎಂದು. ಬದುಕೆಂಬ trainಗೆ ಮೇಲೆ ಇರೋ ಪುಣ್ಯಾತ್ಮ chain ಎಳೆದೇ ಬಿಟ್ಟಿದ್ದ.


ಮೇಲಿರುವವನ ತಮಾಷೆ ನೋಡಿ, ನಾವು ಚಿಕ್ಕವರು ಇದ್ದಾಗ ನಾವೇನಾದ್ರು ತಪ್ಪು ಮಾಡಿದ್ರೆ ನಮ್ಮಮ್ಮ ಕೈ ಮೇಲೆ ಬರೆ ಹಾಕ್ತಿದ್ರು. ಈಗ ಅವ್ರು ನಮ್ಮನ್ನೆಲ್ಲ ಬಿಟ್ಟು ಹೋಗಿ ದೊಡ್ಡ ತಪ್ಪು ಮಾಡಿದಾಗ ಅವರನ್ನೇ ಸುಡ್ತೀವಿ.

ಇದು ನನಗೊಬ್ಬನಿಗೇ ಆಗೋ ಸನ್ನಿವೇಶ ಏನಲ್ಲ. ಸಾವು ಕಾಣದ ಮನೆ ಯಾವುದಿದೆ ಹೇಳಿ. ಎಷ್ಟೇ ಆತ್ಮೀಯರಾಗಿದ್ದರೂ ಒಂದಿನ ಅವ್ರು ನಮ್ಮನ್ನ ಬಿಟ್ಟು ಹೋದಾಗ ದುಃಖ ಆಗತ್ತೆ. ಅದೇ ಜೀವನದ ಸತ್ಯ . ಕೆಲವು ದಿನಗಳ ಕಾಲ ಅವ್ರ ನೆನಪಿನ ಜಾಲ ನಮ್ಮನ್ನು ಸಿಕ್ಕಿ ಹಾಕ್ಸತ್ತೆ. ಕ್ರಮೇಣ daily routine ಹೆಸರಲ್ಲಿ ತಾನಾಗೇ ಸಡಿಲಗೊಳಿಸಿ ಜೀವನ ನಡೆಸಿಕೊಂಡು ಹೋಗತ್ತೆ. ನೆನಪುಗಳೇ ಹಾಗೆ ಅನ್ಸತ್ತೆ. ಚೆನ್ನಾಗಿರೋ ಚರ್ಮಕ್ಕೆ ಕೆರೆದು ಕೆರೆದು ಗಾಯ ಮಾಡತ್ತೆ. ಆಮೇಲೆ time, routine life ಅನ್ನೋ ಮುಲಾಮನ್ನು ಹಚ್ಚತ್ತೆ. ಅವ್ರನ್ನ ಮರೆತು ಅಷ್ಟು easy ಆಗಿ ಜೀವನ ಮಾಡೋ ಅಷ್ಟು ಕಲ್ಲು ಮನಸ್ಸಿದ್ಯ ? ಅಥವಾ ಇಷ್ಟು ದಿನ ನಡೆದಿದ್ದೆಲ್ಲ ಕನಸಾ? ಈ ರೀತಿಯ ಹತ್ತು ಹಲವು doubts ಅಂಡ್ dilemmaಗಳ ನಡುವೆ ಜೀವನ ಅಂತೂ ನಡೀತಾ ಇರತ್ತೆ. ಹೀಗೆ ಸಮುದ್ರ ತಟಕ್ಕೆ ಬಂದು ಬಡಿಯುವ ಅಲೆಗಳಂತೆ ನೆನಪುಗಳು ಮಾತ್ರ ಆಗಾಗ ಬಂದು ಬಡಿದು ಹಿಂದಿರುಗುತ್ತಿರುತ್ತದೆ.

age maturityನೊ, ಕೆಟ್ಟ ಬುದ್ಧಿನೊ ಗೊತ್ತಿಲ್ಲ, ನಾನು ತುಂಬಾ emotional ವ್ಯಕ್ತಿ ಏನಲ್ಲ. ಚಿಕ್ಕವನಿದ್ದಾಗ ನಮ್ಮಪ್ಪ ಬೇರೆ ಊರಲ್ಲಿ ಕೆಲಸ ಮಾಡಕ್ಕೆ ಹೋಗ್ಬಿಟ್ಟಿದ್ರು ಅಂತ ಒಂದೆರಡು ಸರತಿ ಅತ್ತಿದ್ದು ಬಿಟ್ರೆ ಇವಾಗೆಲ್ಲ ಆ ಥರ ಅನ್ಸಲ್ಲ. ನಾನು ನಮ್ಮ ಅಮ್ಮನ್ನ ಯಾವತ್ತಿಗೂ ಅಪ್ಪಿಕೊಂಡಿದ್ದಿಲ್ಲ, love you ಅಮ್ಮ ಅಂದಿದ್ದಿಲ್ಲ, ಅಥವಾ Mothers Dayಗೆ, birthdayಗೆ ವಿಶ್ ಮಾಡಿದ್ದಿಲ್ಲ, whatsapp status ಹಾಕಿದ್ದಿಲ್ಲ.. ಇದೆಲ್ಲ ಹಾಳಾಗಿ ಹೋಗ್ಲಿ. ಕಡೇ ಪಕ್ಷ ಒಂದು ಸೀರೆ ಸಹ ಕೊಡಿಸಿರಲಿಲ್ಲ. ಇಂತಹ ಯಾವುದೇ symbolic ಅನ್ಸೋ ಕೆಲಸ ಮಾಡದೆ ಹೋದರೂ she was always very close to me. ನಮ್ಮೆಲ್ಲರಿಗಿಂತ ತುಸು ಹೆಚ್ಚೇ ಮಾತಾಡುತ್ತಿದ್ದರಿಂದ ಅವರು ಇದ್ರೆ ಮನೆಯಲ್ಲಿ ಅದೇನೋ ಒಂಥರಾ ಉಲ್ಲಾಸ ಉತ್ಸಾಹ. ಯಾವುದೇ ಖುಷಿ ಆದ್ರೂ ಅವರಿಂದಲೇ, ಜಗಳ ಆದ್ರೂ ಅವರಿಂದಾನೆ. ಮಿಕ್ಕ ಮೂರು ಜನ boring ಗಂಡಸರ ಮಧ್ಯೆ  she was the most lively person of the family.

ನಮ್ ಅಮ್ಮ ಅಂದ್ರೆ ನಂಗೆ ತಕ್ಷಣಕ್ಕೆ ನೆನಪು ಆಗೋದು ಅವ್ರು ಪಟ್ಟಿದ್ದ ಕಷ್ಟಗಳು. For a larger part of her life, financial ಕಷ್ಟಗಳು ಇರೋ ಅಲ್ಪ ಸ್ವಲ್ಪ ಸುಖನೆಲ್ಲ ಮರೆ ಮಾಚ್ತಿದ್ದವು. ತುಂಬಾ luxurious ಆಗಿ ಇಲ್ದೆ ಇದ್ರೂ ಎರಡು ಹೊತ್ತು ಊಟ, ಮೂರು ಜೊತೆ ಬಟ್ಟೆ ಗೇನು ತೊಂದರೆ ಇರ್ಲಿಲ್ಲ. ತೊಂದರೆ ಇರ್ಲಿಲ್ಲ ಅಂತಲ್ಲ , ನಮಗೆ ಕಾಣಸಲಿಲ್ಲ. ಅವ್ರು ನನಗೆ ಕೊಟ್ಟ ಅತ್ಯಂತ ದೊಡ್ಡ ಉಡುಗೊರೆ ಅಂದರೆ ವಿದ್ಯಾಭ್ಯಾಸ. ಕಷ್ಟ ಪಟ್ರು ಪರವಾಗಿಲ್ಲ , ಮಕ್ಕಳು ಓದಬೇಕು, ಓದಿದ್ರೆ ಅವ್ರ ಮುಂದಿನ ಜೀವನ ಚೆನ್ನಾಗಿರತ್ತೆ ಅಂತ ಯೋಚಿಸಿ ಅದಕ್ಕೆ ಆದ್ಯತೆ ಕೊಟ್ರು. ತಮ್ಮ ಆರ್ಥಿಕ ಶಕ್ತಿ ಮೀರಿ ಇದ್ದಂತಹ fees ಲೆಕ್ಕಿಸದೆ ಆಗಿನ ಕಾಲಕ್ಕೆ ಒಳ್ಳೆ ಎಜುಕೇಶನ್ ಕೊಡ್ಸಿದ್ರು. I am always indebted to her for this. ಇವತ್ತು comfortable ಆಗಿ ಜೀವನ ಮಾಡ್ತಾ ಇದೀನಿ ಅಂದರೆ ಅದಕ್ಕೆ ಕಾರಣ ಅವರು ಕೊಡಿಸಿದ education ಎಂಬ ಭದ್ರ ಬುನಾದಿ.

ಇವತ್ತು ಆ comfortನೆಲ್ಲ ಅವರಿಗೆ ಕೊಡೋಣ ಅಂತ ಅಂದರೆ ಅವರೇ ಇಲ್ಲ. ನಾನು Wipro li ಕೆಲಸಕ್ಕೆ ಸೇರಿದ ಹೊಸದರಲ್ಲಿ Orientation time ಅಲ್ಲಿ ‘what do you want to achieve in 5 years’ ಅಂತ ಕೇಳಿದಾಗ, ನಾನು abroadಗೆ ಹೋಗಿ ನನ್ನ parentsನ ಒಂದು ಸರತಿ ಕರೆಸ್ಕೊಬೇಕು, ಅವರಿಗೆ ಪ್ರಪಂಚ ಸುತ್ತಾಡಿಸಬೇಕು ಅಂತ ಹೇಳಿದ್ದೆ. ಅದೇನೋ ಅಂತಾರಲ್ಲ ಹಲ್ಲಿದ್ರೆ ಕಡಲೆ ಇರಲ್ಲ, ಕಡಲೆ ಇದ್ರೆ ಹಲ್ಲೆ ಇರಲ್ಲ ಅಂತ. ಹಂಗೆ ಆಯ್ತು. ಇವತ್ತು ಆಸೆ ಪಟ್ಟಂತೆ ‘abroad’ ಅಲ್ಲಿದಿನಿ, But ……. Time ಅಂದ್ರೆ ಪಕ್ಕ 420 ನೇ ಕಣ್ರೀ. time ಇದ್ದಾಗ ಅದರ ಬೆಲೆ ಗೊತ್ತಾಗಲ್ಲ. ಮಿಂಚಿ ಹೋದಮೇಲೆ ಅದರ value ಗೊತ್ತಾದ್ರೂ use ಇರಲ್ಲ. ಎಷ್ಟೋ ಬಾರಿ ನಾನು India ಬಿಟ್ಟು ಬರಬಾರದಿತ್ತು ಅನ್ಸಿದೆ. Actually, ಇಲ್ಲಿಗೆ ಬಂದಿದ್ದು ನನ್ನ ಜೀವನಕ್ಕೆ ತುಂಬಾನೇ help ಆಗಿದೆ. But I could have spent more time with her ಅನ್ನೋ ಕೊರಗು ಸದಾ ಇದ್ದೆ ಇರತ್ತೆ. ಇಲ್ಲಿಗೆ ಬಂದಮೇಲೆ university classes , time zone difference ಅಂತೆಲ್ಲ ದಿನ phone ಮಾಡೋಕೆ ಟೈಮ್ ಆಗ್ತಾ ಇರ್ಲಿಲ್ಲ. ಅಥವಾ ನಾನೇ time ಮಾಡ್ಕೋತಾ ಇರ್ಲಿಲ್ಲ. ಅವರು ಆಸ್ಪತ್ರೇಲಿ ನರುಳಿತ್ತಿದ್ದಾಗ ಅವರ ಪಕ್ಕದಲ್ಲಿ ಹೆಚ್ಚು ಸಮಯ ಕಳೆಯಲೂ ಸಾಧ್ಯವಾಗಲಿಲ್ಲ. ಈ ಒಂದು guilt ಯಾವಾಗ್ಲೂ ಕಾಡ್ತಾನೇ ಇರತ್ತೆ. ಇರೋ ಅಷ್ಟು ದಿವಸ ನನ್ನವರ ಜೊತೆ ಆದಷ್ಟು time spend ಮಾಡ್ಬೇಕು ಅನ್ನೋ ದೊಡ್ಡ ಪಾಠ ಕಲಿಸಿತು ಅವ್ರ ಸಾವು. Practically speaking, permanent ಆಗಿ ತಕ್ಷಣಕ್ಕೆ Indiaಗೆ ಬರಲಾಗದೆ ಇದ್ದರೂ ಅವಕಾಶ ಸಿಕ್ಕಾಗಲೆಲ್ಲ ಹಿಂದೆ ಮುಂದೆ ನೋಡದೆ next available flight ಹತ್ತೋ ಒಳ್ಳೆ ಅಭ್ಯಾಸ ಬೆಳೆಸಿಕೊಂಡಿದೀನಿ.

ಇದನ್ನೆಲ್ಲಾ ಬರೆದಿರೋ ಉದ್ದೇಶ ಇಷ್ಟೇ. Unnecessary ಕಾರಣಗಳಿಗೆ ನಮಗೆ ಹತ್ತಿರ ಆಗಿರೋವ್ರ ಜೊತೆ ಕಾಲ ಕಳೆಯೋಕೆ ಸಿಗೋ chance ಕಳ್ಕೊಬೇಡಿ. ಜಗಳಗಳು, ಮನಃಸ್ತಾಪಗಳು ಇವೆಲ್ಲ ಇದ್ದಿದ್ದೇ. ಟ್ರೈನ್ ಹೋದಮೇಲೆ AC class ಅಲ್ಲಿ ಮಾಡಿಸಿರೋ ticket ಕೂಡ waste ಆಗತ್ತೆ. One fine day, ಹಂಗಿರಬೇಕಾಗಿತ್ತು, ಹಿಂಗಿರಬೇಕಾಗಿತ್ತು ಅನ್ನೋ ಯೋಚನೆಗಳು ಕಮ್ಮಿ ಆಗಲಿ.

ಸರಿ , Mobile ಬ್ಯಾಟರಿ ಖಾಲಿ ಆಗಿ ಕಣ್ ರೆಪ್ಪೆಗಳು ಕೊನೆಗೂ ಮುಚ್ಚುವ ಮುನ್ಸೂಚನೆ ಕೊಡುತ್ತಿದ್ದವು. Alexa play ‘ಕಣ್ಣ ಮುಚ್ಚೆ ಕಾಡೇ ಗೂಡೆ’ from ಉಳಿದವರು ಕಂಡಂತೆ ಅಂತ ಹೇಳಿ ಮಲ್ಕೊಂಡೆ …….

ಬೆಳೆದ ಮರವೊಂದು ತನ್ನ ಬೇರನ್ನ ತಾನೇ ಕಾಣ ಬಯಸಿದೆ
ಮುಗಿಲ ಕಾಣುವ ಹಕ್ಕಿ ಮರಿಯೊಂದು ತಾಯಿಯ ಗೂಡನು ಅರಸಿದೆ

Facebook Comments

Leave a Reply

Close Menu
%d bloggers like this: