ಎಲ್ಲವೂ ಪರಮಾತ್ಮನಿಚ್ಚೆ ನಾನು ಕೇವಲ ನಿಮಿತ್ತ ಮಾತ್ರನು.ಕೆಟ್ಟ ಕೆಲಸದ ಫಲ ನನಗೆ ತಟ್ಟುವುದಿಲ್ಲ ಎಂದು ದುಷ್ಕರ್ಮಿಗಳು ಆಡುವ ಮಾತು ಸರಿಯೇ ?
ಎಲ್ಲವೂ ಪರಮಾತ್ಮನಿಚ್ಚೆ ನಾನು ಕೇವಲ ನಿಮಿತ್ತ ಮಾತ್ರನು.ಕೆಟ್ಟ ಕೆಲಸದ ಫಲ ನನಗೆ ತಟ್ಟುವುದಿಲ್ಲ ಎಂದು ದುಷ್ಕರ್ಮಿಗಳು ಆಡುವ ಮಾತು ಸರಿಯೇ ?

ನಾನು ನಿಮಿತ್ತ ಮಾತ್ರನು ಎಲ್ಲವೂ ಪರಮಾತ್ಮನಿಚ್ಚೆ ಎಂದು ಕೆಟ್ಟ ಕೆಲಸವನ್ನು ಮಾಡುವವರು ನುಡಿದರೆ ಅದು ಕೇವಲ ಬಾಯಿ ಮಾತು.. ಜಾಣತನದ ನುಡಿ ತಿಳಿದು ತಿಳಿದೂ ಕೆಟ್ಟ ಕಾರ್ಯವನ್ನು ಮಾಡುವವನು ತಪ್ಪದೆ ಶಿಕ್ಷೆಯನ್ನು ಅನುಭವಿಸುತ್ತಾನೆ ತಂಗಿಯ ಮಕ್ಕಳನ್ನು ಕೊಲ್ಲಬೇಡ ಶಿಶು ಹತ್ಯೆ ಮಹಾಪಾಪ ಎಂದು ಕಂಸನಿಗೆ ತಿಳುವಳಿಕೆ ಕೊಟ್ಟಾಗ ಅವನು ‘ನಾನು ನಿಮಿತ್ತ ಮಾತ್ರನು, ಎಲ್ಲವೂ ಪರಮಾತ್ಮನಿಚ್ಛೆ ‘ ಎಂದು ತಂಗಿಯ ಮಕ್ಕಳನ್ನು ಕೊಲ್ಲಲು ಆರಂಭಿಸಿದನು ಪಾಪದ ಫಲವಾಗಿ ಅವನು ಕೇವಲ ಬಾಲಕರಾದ ಶ್ರೀಕೃಷ್ಣ ಬಲರಾಮರಿಂದ ಕೊಲ್ಲಲ್ಪಟ್ಟನು.’ನಾನು ನಿಮಿತ್ತ ಮಾತ್ರ, ಎಲ್ಲವೂ ಭಗವದಿಚ್ಛೆ ಎಂಬ ಮಾತು ಹೃದಯದಿಂದ ಬಂದದ್ದೇ ಆದರೆ ಅಂಥ ವ್ಯಕ್ತಿಯ ಪರಮಾತ್ಮನಲ್ಲಿ ಅಚಲವಾದ ಭಕ್ತಿ ಇಟ್ಟು, ಅವನೇ ಎಲ್ಲವನ್ನು ಮಾಡಿಸುವನೆಂದೂ, ನನ್ನದೇನು ಇಲ್ಲ ಎಂದು ನಂಬಿದವನು ಎಂದಿಗೂ ಕೆಟ್ಟ ಕೆಲಸಕ್ಕೆ ಕೈ ಹಾಕುವುದೇ ಇಲ್ಲ

-ಸಂಗ್ರಹ .

ಗ್ರಂಥ ಋಣ : ಪ್ರೊ ಲಲಿತಾಂಬ ಚಂದ್ರಶೇಖರ್

Facebook Comments

Leave a Reply

Close Menu
%d bloggers like this: