ಲಾಕ್ ಡೌನ್ ಎಫೆಕ್ಟ್ ಏನು ಆಗಬಹುದು ?
ಲಾಕ್ ಡೌನ್ ಎಫೆಕ್ಟ್ ಏನು ಆಗಬಹುದು ?

ಎಲ್ಲೆಡೆ ಕೊರೊನ .. ಇಡೀ ದೇಶ lockdown.. ಈಗಾಗ್ಲೇ ಟಿವಿಲೀ ಪೇಪರ್ ಅಲ್ಲಿ GDP ಕುಸಿತ.. ಆರ್ಥಿಕ ಹಿಂಜರಿತ ಅಂತ ಕೇಳ್ತಾ ಇದೀವಿ..
ಹಾಗಿದ್ರೆ ಲಾಕ್ ಡೌನ್ ಮುಗಿದ್ ಮೇಲೆ ಏನೇನು ಆಗ್ಬೋದು ?
ಮೊದಲಿಗೆ ಸರ್ಕಾರದ ದೊಡ್ಡ ಯೋಜನೆಗಳು ಅಂದ್ರೆ ಹೊಸ ಏರ್ಪೋರ್ಟ್ ನಿರ್ಮಾಣ , ದೊಡ್ಡ ಬ್ರಿಡ್ಜ್ ಕಟ್ಟೋದು (infrastructure related works ) ಕಾರ್ಯರೂಪಕ್ಕೆ ಬರೋದು ತಡ ಆಗುತ್ತೆ.. ಕೆಲವೊಂದು ಯೋಜನೆ ಸ್ಥಗಿತ ಆಗಬಹುದು.. ಹೊಂಡ ಗುಂಡಿ ಇರೋ ಹೈವೇ ರೋಡ್ನಲ್ಲಿ ಓಡಾಡೋಕೆ ತಯಾರಾಗ್ಬೇಕು..
ಸಣ್ಣ ಪುಟ್ಟ ಕಂಟ್ರಾಕ್ಟರ್ ಗಳಿಗೆ ಸರಿಯಾದ ಸಮಯಕ್ಕೆ ಮಾಡಿದ್ ಕೆಲ್ಸದ್ ಬಿಲ್ ಆಗೋಲ್ಲ.. ಹೊಸ ಕೆಲಸ ಅಷ್ಟ್ easy ಆಗಿ ಸ್ಯಾಂಕ್ಷನ್ ಆಗೋಲ್ಲ..


ಇಷ್ಟೆಲ್ಲಾ ಆದರು ಈ ಮೀಸಲಾತಿಗೆ, ಹಲವಾರು ಬಾಗ್ಯ ಯೋಜನೆಗಳು ರಾಜಕೀಯ ಕಾರಾಣಕ್ಕೋಸ್ಕರ ನಷ್ಟ ಆದ್ರೂ ಸರ್ಕಾರ ನಿಲ್ಸಲ್ಲ.. ಇದನ್ನ ಸರಿದೂಗಿಸಲು ಹಾಗೂ ಲಾಕ್ ಡೌನ್ ನಿಂದ ಬರಿದಾದ ಬೊಕ್ಕಸ ತುಂಬಿಸೋಕೆ tax ವಸೂಲಿ ತುಂಬ strict ಆಗುತ್ತೆ ಸಾಮಾನ್ಯ ಜನರಿಗೆ ಇಂಡೈರೆಕ್ಟ್ ಟ್ಯಾಕ್ಸ್ ಹೆಚ್ಚಿಗೆ ಬೀಳುತ್ತೆ ..
ಅನಿವಾರ್ಯವಾಗಿ ಮಧ್ಯಮ ವರ್ಗದವರಿಗೆ ಹೊರೆ ತಪ್ಪಿದ್ದಲ್ಲ. ಹಾಗಿದ್ರೆ common man ಆಗಿ ದೇಶದ ಆರ್ಥಿಕತೆಗೆ ಹೇಗೆ ಕೊಡುಗೆ ನೀಡ್ಬೋದು ?
ಮೊದಲು ನಮ್ಮ ದೇಶದ ಸಂಪತ್ತು ಹೊರ ದೇಶಕ್ಕೆ ಹರಿದು ಹೋಗೋದನ್ನ ತಡೀಬೇಕು .. ವಿದೇಶಿ ಬ್ರಾಂಡ್ ಖರೀದಿ ನಿಲ್ಸಿ ಸ್ವದೇಶೀ ಬ್ರಾಂಡ್ ಉತ್ಪನ್ನ ಖರೀದಿ ಮಾಡಿದ್ರೆ ಆ ವಸ್ತುವಿನ ಲಾಭದ ಹಣ ಹೊರ ದೇಶಕ್ಕೆ ಹೋಗೋಲ್ಲ .. ಇದುನ್ನೆ ತುಂಬಾ ವರ್ಷದಿಂದ ಎಲ್ಲರೂ ಹೇಳ್ತಾ ಬರ್ತಾ ಇದೀವಿ ಈಗ ನಿಜವಾಗ್ಲೂ ನಾವು ಪಾಲಿಸಲೇಬೇಕು
ದೇಶಿಯ ಉತ್ಪನ್ನವನ್ನೇ ಖರೀದಿ ಮಾಡ್ಬೇಕು ಆಗ ಇಲ್ಲಿನ ಉದ್ಯಮಗಳು ನಷ್ಟದಿಂದ ಹೊರ ಬರುತ್ತೆ ಸಣ್ಣ ಪುಟ್ಟ ಉದ್ಯೋಗ ಸೃಷ್ಟಿ ಆಗುತ್ತೆ ..


ಇನ್ನೂ ಮುಖ್ಯವಾಗಿ ಈಗ ಇರೋ ಮೂಲಭೂತ ಸೌಕರ್ಯನ ಹಾಳಾಗದಂತೆ ತಡೆಯೋದು.. ಯಾಕಂದ್ರೆ ಯಾವುದೇ ದೇಶಕ್ಕೆ ಈ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಅನ್ನೋದು ತುಂಬಾ costly.. ಯಾವುದೇ ರಾಜಕೀಯ ಪುಡಾರಿ ಮಾತ್ ಕಟ್ಕೊಂಡು ಅವರು ಕೊಡೊ ಎಂಜಲು ಕಾಸು ತಗೊಂಡು ದೇಶ ನ ಬಂದ್ ಮಾಡೋದು..
ದೇಶ ಮೊದಲು ಅನ್ನೋದನ್ನ ಮರೆತು ಬಸ್ ಸುಡೋದು, ರೈಲ್ವೆ ಸ್ಟೇಷನ್ ಒಡಿಯೋದು ಜನ ಬಿಡಬೇಕು., ಒಂದೊಮ್ಮೆ ಸರ್ಕಾರ ಅಂತವರನ್ನ ಶಿಕ್ಷಿಸದಿದ್ದರೆ
ದೇಶದ ಅಭಿರುದ್ದಿಗೆ ಯಾರು ಮಾರಕ ಅನ್ನಿಸ್ತಾರೋ ಅಂತವರನ್ನು ದೂರ ಇಡಬೇಕು..
ವ್ಯಾವಹಾರಿಕವಾಗಿ ದೂರ ಇಟ್ಟರೆ ಬುದ್ದಿ ಬರುತ್ತೆ.. ದೇಶದ ಸಂಕಷ್ಟದ ಸಮಯದಲ್ಲಿ ಈ ದೇಶದ ನಾಗರೀಕರಾಗಿ ದೇಶ ಕಟ್ಟುವ ಕೆಲಸ ಮಾಡುವುದು ಕರ್ತವ್ಯ ಹಾಗೂ ಅನಿವಾರ್ಯ. 

Facebook Comments

Leave a Reply

Close Menu
%d bloggers like this: